ಸುಮಾರು 51 ವರ್ಷಗಳಿಂದ ಕಳಸದ ಪೇಟೆಯಲ್ಲೇ ಮೀನಾಕ್ಷಿ ಭವನ ಎಂಬ ಹೋಟೆಲ್ ನಡೆಸುತ್ತ ಪರಿಶ್ರಮದಿಂದ ತಮ್ಮ ಜೀವನ ಸಾಗಿಸುತ್ತಿರುವ ಗಣೇಶ್ ರಾವ್ ಅವರಿಗೆ ಈಗ 61 ವರ್ಷ ವಯಸ್ಸು ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಾಧ್ಯವಾಗದೇ ತಮ್ಮ ತಂದೆ 1971 ರಲ್ಲಿ ಸ್ಥಾಪಿಸಿದ ಈ ಹೋಟೆಲನ್ನೇ ಯಶಸ್ವಿಯಾಗಿ ಮುಂದುವರಿಸಿಕೊಂಡು ಸಾಗುತ್ತಿದ್ದಾರೆ..
ಮೀನಾಕ್ಷಿ ಭವನದ ವಿಶೇಷತೆ ಎಂದರೆ ಅದು ಇಲ್ಲಿ ತಯಾರಿಸುವ ಎಲ್ಲಾ ತಿಂಡಿಗಳ ರುಚಿ...ಮನೆಯಲ್ಲಿ ಅಮ್ಮ ತಯಾರಿಸುವ ರೀತಿಯ ಮನೆ ರುಚಿ..ಇಡ್ಲಿ,ವಡೆ ಖಾರ ದೋಸೆ, ನೀರು ದೋಸೆ, ಚಿತ್ರಾನ್ನ ಮಧ್ಯಾಹ್ನ ಊಟ ಹೀಗೆ ಪ್ರತಿಯೊಂದು ಬಹಳ ರುಚಿ ಇದಕ್ಕೆ ಕಾರಣ ತಿಂಡಿಗಳನ್ನು ತಯಾರಿಸಲು ಸೌದಿ ಒಲೆ ಹಾಗೂ ಕಡಿವ ಕಡೆಯುವ ಕಲ್ಲನ್ನು ಈಗಲೂ ಬಳಸುತ್ತಾರೆ..
ಗಣೇಶ್ ರಾವ್ ಅವರ ಹೆಂಡತಿ ಕೂಡ ಅಲ್ಲೇ ಇದ್ದು ಸಹಾಯ ಮಾಡುತ್ತಾರೆ..ಒಮ್ಮೆ ಈ ದಂಪತಿಗಳ ಕೈ ರುಚಿ ನೋಡಿದವರು ಮತ್ತೆ ಸದಾ ಬರುತ್ತಲೇ ಇರುತ್ತರೆ..ಯಾವ 5 ಸ್ಟಾರ್ ಹೋಟೆಲ್ ಗೂ ಕಡಿಮೆ ಇಲ್ಲ..ಇನ್ನೂ ಅಲ್ಲಿರುವ ನೀರಿನ ಹಂಡೆಗೆ 100 ವರ್ಷ ಜೊತೆ ಹಳೆಯ ಖುರ್ಚಿ, ಟೇಬಲ್ ಹೀಗೆ ಹಳೆಯ ಹಂಚಿನ ಮನೆಗೆ ಹೋದ ಅನುಭವ..
ಕಳಸಕ್ಕೆ ಹೋದಾಗ ಅಲ್ಲೇ ಪೇಟೆಯಲ್ಲಿರುವ ಮೀನಾಕ್ಷಿ ಭವನಕ್ಕೆ ಹೋಗಿ ದಂಪತಿಗಳ ರುಚಿಯಾದ ಅಡುಗೆಯನ್ನು ಸವಿಯಲು ಮರೆಯಬೇಡಿ...ಇಂತಹ ಹಳೆಯ ಹೋಟೆಲ್ ಗಳಲ್ಲೇ ನಿಜವಾದ ರುಚಿ ಅಡಗಿದೆ ಹಾಗೂ ಈ ಹೋಟೆಲ್ ಗಳು ಉಳಿಯಬೇಕು...ನೀವು ಕೂಡ ಒಮ್ಮೆ ಭೇಟಿ ನೀಡಿ...



0 Comments