ಗಣೇಶ್ ಭಟ್ ವಾರಣಾಸಿ ಅವರು ಕಾಸರಗೋಡು ಜಿಲ್ಲೆಯ, ಮಂಜೇಶ್ವರ ತಾಲೂಕಿನ ಕೋಳ್ಯೂರಿನವರು.ಹಾಗೂ ಉತ್ತಮ ಅಂಕಣಕಾರರು, ಕೃಷಿಕರು ಹೀಗೆ ಬಹುಮುಖ ವ್ಯಕ್ತಿತ್ವ ಜೊತೆಗೆ ವಿಶೇಷ ಮಕ್ಕಳಿಗೆ ಸದಾ ಮಿಡಿಯುವ ಮನಸ್ಸು...
ಕಳೆದ 17 ವರ್ಷಗಳಿಂದ ವಿಶೇಷ ಚೇತನ ಮಕ್ಕಳ ಜೊತೆಗಿನ ಅವರ ಒಡನಾಟ ಆ ಮಕ್ಕಳನ್ನು ಸಮಾಜದ ಜೊತೆ ಸೇರಿಸುವ ಪ್ರಯತ್ನ ಇಂತಹ ಮಕ್ಕಳಿಗೆ ಮತ್ತಷ್ಟು ನೆರವಾಗಲು 3 ಜನ ಗೆಳೆಯರ ಜೊತೆ ಸೇರಿ ವಿಕಾಸಂ ಸೇವಾ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ದಿವ್ಯಾಂಗ ಮಕ್ಕಳನ್ನು ತರಬೇತಿಗೊಳಿಸುವ ಅಪರೂಪದ ಕಾಯಕ ಈ ಎಲ್ಲ ರೀತಿಯ ಅವರ ಸೇವೆ ಶ್ಲಾಘನೀಯ..
ಗ್ರಾಮೀಣ ಪ್ರದೇಶದಲ್ಲಿರುವ ವಿಶೇಷ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಬಂಟ್ವಾಳದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸಿ ಒಂದು ರೂಪಾಯಿ ಶುಲ್ಕವಿಲ್ಲದೆ ಪ್ರೀತಿಯಿಂದ ನೋಡಿಕೊಳ್ಳುತ್ತ ಅವರನ್ನು ಚುರುಕುಗೊಳಿಸುವ ಅವರಿಗೆ ಬೇಕಾದ ಶಿಕ್ಷಣ ನೀಡುವ ಜೊತೆಗೆ ತಂದೆ ತಾಯಿಯರಿಗೆ ಈ ಕುರಿತು ಅರಿವು ಮೂಡಿಸಿ ದೈರ್ಯ ತುಂಬುವ ಅಪರೂಪದ ಕಾಯಕ ಮೆಚ್ಚುವಂತದ್ದು, ಈ ಮಕ್ಕಳನ್ನು ದೂರ ಇಡುವ ಪ್ರಯತ್ನ ಸದಾ ನಡೆಯುತ್ತಲೇ ಬಂದಿದೆ ಆದರೆ ಆವರ ಭಾವನೆಗಳು ಮುಗ್ಧ ಮನಸ್ಸಿನ ಮಕ್ಕಳನ್ನು ಎಲ್ಲರಂತೆ ಬದುಕು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸುವುದು ಬಹಳ ಅಗತ್ಯ
ವಿಕಾಸಂ ಮೂಲಕ 200 ಕ್ಕೂ ಹೆಚ್ಚಿನ ಅಂಗನವಾಡಿ ಶಿಕ್ಷಕರಿಗೆ ದಿವ್ಯಾಂಗ ಮಕ್ಕಳನ್ನು ಪತ್ತೆ ಹಚ್ಚುವುದು ಹೇಗೆ ಎಂಬ ಕುರಿತು ಕಾರ್ಯಾಗಾರ ನಡೆಸಿ ಜಾಗೃತಗೊಳಿಸುವ ಕೆಲಸವನ್ನು ಮಾಡಿದ್ದಾರೆ.ಸಾಕಷ್ಟು ಹೆತ್ತವರಿಗೆ ಮಾರ್ಗದರ್ಶನ ನೀಡುವ ಮೂಲಕ ಬೆಂಬಲವಾಗಿ ನಿಂತಿದ್ದಾರೆ.
ವಿಶೇಷ ಮಕ್ಕಳ ಕುರಿತು ಹಲವು ಉಪಯುಕ್ತವಾದ ನಾವು ತಿಳಿಯಬೇಕಾದ ವಿಚಾರಗಳು ಇವೆ..ಅದನ್ನು ಈ ಸಂವಾದದ ವಿಡಿಯೋ ಮೂಲಕ ನೋಡಿ



0 Comments