ನಾವು ದಿನನಿತ್ಯ ಜೇಡಗಳನ್ನು ಮನೆಯ ಗೋಡೆಗಳಲ್ಲಿ ಅಥವಾ ಯಾವುದೋ ಗಿಡಗಳಲ್ಲಿ ನೋಡಿರುತ್ತೇವೆ ಆದರೆ ಹೆಚ್ಚು ಗಮನಿಸುವ ಅವುಗಳ ಚಟುವಟಿಕೆಯ ಬದುಕಿನ ರೀತಿಗಳನ್ನು ತಿಳಿಯಲು ಹೋಗುವುದಿಲ್ಲ ಆದರೆ ಪುತ್ತೂರಿನ ಸಾಮೆತ್ತಡ್ಕದಲ್ಲಿ ಪುಟ್ಟದೊಂದು ಕೃಷಿ ಭೂಮಿಯಲ್ಲಿ ಹಲವು ವರ್ಷಗಳಿಂದ ಜೇಡಗಳ ಬದುಕನ್ನು ಸೂಕ್ಷ್ಮವಾಗಿ ಗಮನಿಸುತ್ತ ಅವುಗಳ ಕುರಿತು ಅರಿತವರು ವಸಂತಿ. ಕೆ..
ಜೇಡಗಳು ಮಾನವ ಬದುಕಿನ ಜೊತೆ ಬೆಸೆದುಕೊಂಡಿರುವ ಜೀವಿಗಳು..ವಸಂತಿ ಅವರು ಸದಾ ಕೂತುಹಲದಿಂದ ಜೇಡಗಳನ್ನು ಅವುಗಳಲ್ಲಿನ ವೈವಿಧ್ಯವನ್ನು ರಂಗು ರಂಗಿನ ಬಣ್ಣಗಳನ್ನು ನೋಡುತ್ತ ತಮ್ಮ ಮೊಬೈಲ್ ನಲ್ಲಿ ಫೋಟೊ ಕ್ಲಿಕ್ಕಿಸಿ ಸಂಭ್ರಮಿಸುವ ಅವರ ಜೀವನ ಆಸಕ್ತಿ ನಿಜಕ್ಕೂ ಮಾದರಿ



0 Comments